(ಜನನ:ನವೆಂಬರ್ ೧೬,೧೯೪೨) 'ಸ್ಯಾಮ್ ಪಿತ್ರೋಡಾ'ರವರನ್ನು ಭಾರತದ ದೂರಸಂಪರ್ಕ ಕ್ರಾಂತಿಯ ಹರಿಕಾರ ಎಂದು ಗುರುತಿಸಲಾಗುತ್ತಿದೆ. ಇವರ ನಿಜನಾಮಧೇಯ 'ಸತ್ಯನಾರಾಯಣ ಗಂಗಾರಾಮ್ ಪಿತ್ರೋಡಾ'. ಪ್ರಸ್ತುತ 'ಭಾರತೀಯ ಜ್ಞಾನ ಆಯೋಗ' ದ ಚೇರಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. == 'ರಾಜೀವ್ ಗಾಂಧಿಯ'ವರು 'ಸ್ಯಾಮ್ ಪಿತ್ರೋಡ'ರವರ ಕೌಶಲವನ್ನು ಗುರುತಿಸಿದರು == 'ಟೆಲಿಕಾಂ ದಿಗ್ಗಜ', 'ಸ್ಯಾಮ್ ಪಿತ್ರೊಡ’ ರವರು, ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ, ಅವರ ಜೊತೆಗೆ ನಿಕಟವಾಗಿ ಕೆಲಸಮಾಡಿದರು. ಅವರು, ಪ್ರಧಾನಮಂತ್ರಿಗಳ ಮೂಲಭೂತ ಸೌಕರ್ಯ ಮತ್ತು ಸಂಶೋಧನೆಗಳ ಸಲಹೆಗಾರರಾಗಿದ್ದಾರೆ. ’ಸ್ಯಾಮ್ ’ ರವರ ಬುದ್ಧಿಮತ್ತೆ ಹಾಗೂ ಕಾರ್ಯಕುಶಲತೆಯನ್ನು ಶ್ಲಾಶಿಸಿ, ಅಮೆರಿಕದ ಇಲಿನಾಯ್ ವಿಶ್ವವಿದ್ಯಾಲಯ, ಸ್ಯಾಮ್ ಪಿತ್ರೋಡರವರಿಗೆ, ಗೌರವ ಡಾಕ್ಟರೇಟ್ ಪದವಿಯನ್ನು ನೀಡುವುದಾಗಿ ಘೋಶಿಸಿದೆ. ಮೇ, ೭, ೨೦೧೦ ರಂದು, ಇಲಿನಾಯ್ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನಲ್ಲಿ ಪ್ರಶಸ್ತಿಪ್ರದಾನ ಕಾರ್ಯಕ್ರಮ ನಡೆಯಿತು. == 'ಇಲಿನಾಯ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ,' 'ಪಿತ್ರೋಡಾ'ರವರಿಗೆ == ವಿಶ್ವವಿದ್ಯಾಲಯ ಪ್ರತಿವರ್ಷವೂ ಆಯ್ದ ಕೆಲವು ಕ್ಷೇತ್ರಗ್ಳಲ್ಲಿ ಮುಖ್ಯವಾದ ಸಂಶೋಧನೆ, ಸಾಮಾಜಿಕ ಸೇವೆ ಮತ್ತು ಉಪನ್ಯಾಸ ವೃತ್ತಿಯಲ್ಲಿ ಗಮನಾರ್ಹರೀತಿಯಲ್ಲಿ ಸಾಧನೆ ಮಡಿದ ಮಹನೀಯರನ್ನು ಗುರುತಿಸಿ, ಪ್ರಶಸ್ತಿಯನ್ನು ಕೊಡುತ್ತಾ ಬಂದಿದೆ. ಈ ವರ್ಷದ ಪ್ರಶಸ್ತಿಗೆ ಭಾರತದ ಟೆಲಿಕಾಂ ಮಹಾ-ತಜ್ಞರೆಂದು ಗುರುತಿಸಲಾಗಿರುವ, ಪ್ರಧಾನಮಂತ್ರಿಗಳ ಮೂಲಭೂತ ಸೌಕರ್ಯಗಳು ಮತ್ತು ಸಂಶೋಧನೆಯ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಸ್ಯಾಮ್ ಪಿತ್ರೋಡರವರಿಗೆ ನೀಡಲು ವಿಶ್ವವಿದ್ಯಾಲಯ ನಿರ್ಧಾರಮಾಡಿದೆ. ಭಾರತಸರಕಾರದ ಅನೇಕ ಜವಾಬ್ದಾರಿಯುತ ಹುದ್ದೆಗಳಲ್ಲಿ ಕೆಲಸಮಾಡಿ ತಮ್ಮ ಅನುಭವಗಳಿಂದ ಅನೇಕ ಮಹತ್ವದ ಕೊಡುಗೆಗಳನ್ನು ಕೊಟ್ಟಿದ್ದಾರೆ . == ಭಾರತದ ಹಳ್ಳಿಗಳಿಂದ ವಿಶ್ವದ ಯಾವಮೂಲೆಗಾದರೂ ಮಾತಾಡಬಹುದಾಗಿದೆ == ಭಾರತದ ಹಳ್ಳಿಗಾಡಿನಲ್ಲಿ ಪ್ರತಿಹಳ್ಳಿಗಳಿಗೂ ದೂರವಾಣಿ ಸೇವೆಯನ್ನು ದೊರಕಿಸುವಲ್ಲಿ ಪಿತ್ರೋಡರವರ ಸೇವೆ ಅಮೂಲ್ಯವಾಗಿದೆ. ಪ್ರತಿ ಪ್ರಜೆಯೂ ಈ ಸೇವೆಗೆ ಬದ್ಧರು. ಯಾರಿಗೂ ವಂಚನೆಯಾಗಬಾರದು. ಇಂತಹ ಮಹತ್ವದ ಸೇವಾಮನೋಭಾವದಿಂದ ಮುಂದುವರೆದ ಪಿತ್ರೋಡಾರವರು ಸಂಶೋಧನೆ ಪ್ರತಿಫಲಗಳನ್ನು ಕೊಟ್ಟಿದೆ. ಇಂದು ಪ್ರತಿಹಳ್ಳಿಯ ಮೂಲೆಗಳಿಂದ ಜಗತ್ತಿನ ಯಾವ ಭಾಗಕ್ಕಾದರೂ ಸಂಪರ್ಕಕಲ್ಪಿಸಿ ಮಾತನಾಡಬಹುದಾಗಿದೆ. == ಉಲ್ಲೇಖಗಳು ==